
ವಿಜಯಪುರ: ಆಲಮೇಲ ತಾಲೂಕಿನ ಬಗಲೂರು ಗ್ರಾಮದಲ್ಲಿ ರೈತನು ಸಾಲದ ಒತ್ತಡಕ್ಕೆ ಮಣಿದು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ.52 ವರ್ಷದ ಭಾಗಣ್ಣ ಮಲ್ಲಪ್ಪ ಮಾದರ ಅವರು ಬ್ಯಾಂಕಿನಲ್ಲಿ 10 ಲಕ್ಷ ಮತ್ತು ಕೈಸಾಲ 5 ಲಕ್ಷ ಸೇರಿ ಒಟ್ಟು 15 ಲಕ್ಷ ರೂಪಾಯಿ ಸಾಲದಲ್ಲಿ ಮುಳುಗಿದ್ದರು. ಇತ್ತೀಚಿನ ಭೀಮಾನದಿ ಪ್ರವಾಹದಿಂದಾಗಿ ಅವರ 4 ಎಕರೆ ಹತ್ತಿ ಬೆಳೆ ಸಂಪೂರ್ಣ ಹಾನಿಗೊಳಗಾದ ಹಿನ್ನೆಲೆಯಲ್ಲಿ ಮನನೊಂದು ಮಂಗಳವಾರ ಬೆಳಿಗ್ಗೆ ನೇಣು ಬಿಗಿದುಕೊಂಡು ಜೀವ ತೊರೆದಿದ್ದಾರೆ.ಘಟನೆಯ ಮಾಹಿತಿ ದೊರೆತ ಕೂಡಲೇ ಆಲಮೇಲ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.










