
ಕರ್ನಾಟಕ ವಿಧಾನಸಭಾ ಚುನಾವಣೆ 2023ನೇ ಜನತಾದಳ ಜಾತ್ಯಾತೀತ ಪಕ್ಷದ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ದಿನಾಂಕ: 19-12-2019 ರಂದು ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಮಸಾಹೇಬರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿಯವರು ಜೆ. ಪಿ.ಭವನದ ಪಕ್ಷದ ಕಛೇರಿಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು.ಮಾನ್ಯರಿಗೆ ವಿಜಯಪುರ ಜಿಲ್ಲಾ ಜನತಾದಳ ಜಾತ್ಯಾತೀತ ಅಲ್ಪಸಂಖ್ಯಾತರ ಘಟಕದಿಂದ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ಜೆ.ಡಿ.ಎಸ್.ಅಲ್ಪ ಸಂಖ್ಯಾತರ ಘಟಕ ಜಿಲ್ಲಾ ಅಧ್ಯಕ್ಷ ಯಾಕುಬ ಕೂಪರ ಹೇಳಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಒಟ್ಟು ವಿಧಾನಸಭಾ ಕ್ಷೇತ್ರಗಳು 224 ರ ಪೈಕಿ 93 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಈ ಮೊದಲ ಹಂತ ಪಟ್ಟಿಯಲ್ಲಿ ಮುಸ್ಲಿಂ ಅಭ್ಯರ್ಥಿಗಳು 5 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ತೃಪ್ತಿಪಡುವಂತಾಗಿದೆ.2018 ರ ವಿಧಾನಸಭಾ ಮತ್ತು ಉಪಚುನಾವಣೆಯಲ್ಲಿ ಪರಭವಗೊಂಡ ಅಭ್ಯರ್ಥಿಗಳಿಗೆ ಸರಿಸಮಾನವಾಗಿ ಅವಕಾಶವನ್ನು ಕಲ್ಪಿಸಬೇಕಾಗಿತ್ತು.ಆದರೆ ಈ 93 ಅಭ್ಯರ್ಥಿಗಳಲ್ಲಿ ವಿಜಯಪುರ ಜಿಲ್ಲೆಗೆ ಮುಸ್ಲಿಂ ಅಭ್ಯಥಿಯನ್ನು ನೀಡದೇ ಇರುವದು ಅಸಮಾಧಾನವಾಗಿದೆ. ಬೆಂಗಳೂರು ಕುಮಾರ ಪರ್ವ ಮೀಷನ್123 ಅಲ್ಪ ಸಂಖ್ಯಾತರ ಕಾರ್ಯಗಾರದಲ್ಲಿ ಹೇಳಿರುವಂತೆ ಮುಂಬರುವ ಚುನಾವಣೆ 2023ಕೆ 25% ಪ್ರತಿಶತ ಮುಸ್ಲಿಂರಿಗೆ ಅವಕಾಶ ನೀಡುತ್ತೇವೆ ಎಂದು ವರಿಷ್ಠರು ಹೇಳಿಕೆ ನೀಡಿದ್ದರು ಎಂದರು. ಜೆ.ಡಿ.ಎಸ್ ಅಲ್ಪ ಸಂಖ್ಯಾತರ ಘಟಕ ಕಾರ್ಯಾಧ್ಯಕ್ಷ ದಸ್ತಗೀರ ಸಾಲೋಟಗಿ ಮಾತನಾಡಿ, ಮುಸ್ಲಿಂ ಸಮುದಾಯದ ಮತದಾರರು ಕರ್ನಾಟಕದಲ್ಲಿ 105 ಮತಕ್ಷೇತ್ರಗಳ ನಿರ್ಣಾಯಕ ಪಾತ್ರವನ್ನು ವಹಿಸಲಿದ್ದಾರೆ. ವಿಜಯಪುರ ಜಿಲ್ಲೆಯ ಪ್ರತಿಯೊಂದು ಮತಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳು 30-40 ಸಾವಿರ ಮತದಾರರು ಒಳಗೊಂಡಿದ್ದು, ನಗರದಲ್ಲಿ 50% ಅಲ್ಪಂ ಸಂಖ್ಯಾತರ ಮತಗಳಿವೆ. ಆದರೂ ಮುಸ್ಲಿಂ ಸಮುದಾಯಕ್ಕೆ ಟಿಕೇಟ ನೀಡದೆ ತಾರತಮ್ಯ ನಡೆದಿದೆ. ವಿಜಯಪುರ ನಗರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡದೇ ಹೊಂದಾಣಿಕೆ ರಾಜಕೀಯ ಮಾಡಲು ದಾರಿದೀಪವಾಗಿದೆ. ರಾಜ್ಯಾಧ್ಯಕ್ಷರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಕ್ಷೇತ್ರದಲ್ಲಿ ಜಾತಿವಾರು ಪಕ್ಷವಾರು ಕಾರ್ಯಕರ್ತರ ಅಭಿಪ್ರಾಯ ಪಡೆದು ಟಿಕೇಟ ಹಂಚಿಕೆ ಮಾಡಿದರೆ ಅಧಿಕ ಅಭ್ಯರ್ಥಿಗಳು ಗೆಲ್ಲಲು ಸಹಕಾರಿಯಾಗಲಿದೆ. ಈಗಾಗಲೇ ಬಿಡುಗಡೆಗೊಳಿಸಿದ ವಿಜಯಪುರ ಜಿಲ್ಲೆಯ 7 ಮತಕ್ಷೇತ್ರದ ಪಟ್ಟಿಯಲ್ಲಿಯ ಕೆಲವು ಅಭ್ಯರ್ಥಿಗಳ ಆಯ್ಕೆ ಅಸಮಾಧಾನಕ್ಕೆ ಕಾರಣವಾಗಿದೆ ಎಂದರು.ಅರ್ಹತೆ ಇಲ್ಲದವರಿಗೆ ಜಿಲ್ಲಾ ಚುಕ್ಕಾಣಿ ನೀಡಿರುವುದು ತಪ್ಪು. ಅದರಿಂದ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಹಿನ್ನಡೆಯಾಗುತ್ತಿದೆ.ನಮ್ಮನಾಯಕತ್ವದ ಬೆಳವಣಿಗೆ ಕುಂಠಿತವಾಗುತ್ತಿದೆ. ಅನ್ಯ ಪಕ್ಷಗಳ ಏಜೆಂಟರಾಗಿ ಕೆಲವರು ಕಾರ್ಯನಿರ್ವಹಿಸುತ್ತಿದ್ದಾರೆ ಅಂತವರಿಂದ ನಮ್ಮ ಪಕ್ಷಕ್ಕೆ ಮುಜುಗರ ಉಂಟಾಗುತ್ತಿದೆ. ಕೂಡಲೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು.
ನಮ್ಮಸಮುದಾಯದ ಪ್ರಮುಖ ಪಾತ್ರ ಸಿಕ್ಕಿದ್ದೆ ಆದಲ್ಲಿ ಜಿಲ್ಲೆಯಲ್ಲಿ 5 ಕ್ಷೇತ್ರದಲ್ಲಿ ವಿಜಯ ಪತಾಕೆಯನ್ನು ಹಾರಿಸಲಾಗುವುದು ಎಂದರು. ಜೆ.ಡಿ.ಎಸ್. ಅಲ್ಪ ಸಂಖ್ಯಾತರ ನಗರ ಘಟಕದ ಅಧ್ಯಕ್ಷ ಡಾ. ಶಮಶೇರಅಲಿ ಮುಲ್ಲಾ ಮಾತನಾಡಿ, ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಕುರುಬ ಸಮುದಾಯಕ್ಕೆ ಮತ್ತು ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ನಾಗಠಾಣ, ಇಂಡಿ, ದೇವರಹಿಪ್ಪರಗಿ ಮತಕ್ಷೇತ್ರಗಳ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಪ್ರಭಾವಿ ನಾಯಕರ ದಂಡು ಪಕ್ಷಕ್ಕೆ ಆಸಕ್ತಿ ತೋರುತ್ತಿದ್ದಾರೆ. ಆದ್ದರಿಂದ 2ನೇ ಹಂತದ ಆಯ್ಕೆ ಪಟ್ಟಿಯಲ್ಲಿ ನಿರ್ಣಯ/ ಆಯ್ಕೆಮಾಡಿದ್ದೇ ಆದಲ್ಲಿಗೆಲ್ಲುವ ನೀರಿಕ್ಷೆ ಇತ್ತು. ಈ ಹಿಂದೆ ನಡೆದ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಒಟ್ಟು 20 ಅಭ್ಯರ್ಥಿಗಳು ಸ್ಪರ್ಧೆ ಮಾಡಿ ಪಕ್ಷದ ಗೌರವ, ಘನತೆ ಕಾಪಾಡಿದ್ದಾರೆ. ಈ ಒಟ್ಟು 20 ಅಭ್ಯರ್ಥಿಗಳಲ್ಲಿ 14 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿ ಇರುವುದು ವಿಶೇಷವಾಗಿತ್ತು. 2018 ರ ಅಭ್ಯರ್ಥಿಯು 2000 ಮತಗಳನ್ನು ಪಡೆಯಲು ಶ್ರಮಿಸಬೇಕಾಯಿತು.ಆದರೆ 20 ಅಭ್ಯರ್ಥಿಗಳು ಕ್ರೂಢೀಕರಣ ಮಾಡಿದ ಮತಗಳು 12500 ಗಳಾಗಿವೆ.ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ರಚಿಸಿದ ಕೋರ ಕಮೀಟಿ 2 ದಿನದಲ್ಲಿ ಡಿಸಾಲ್ವ ಮಾಡಲಾಯಿತು.ಸ್ವ-ಇಚ್ಛೆಯಂತೆ ಟಿಕೇಟ ಹಂಚಲಾಯಿತು. ಪಕ್ಷದ ಜಿಲ್ಲಾ ಅಧ್ಯಕ್ಷರು ಕೆಲವರ ಕೈ-ಗೊಂಬೆಯಾಗಿ ಕೆಲಸದಲ್ಲಿ ನಿರತರಾಗಿದ್ದಾರೆ. ಅಲ್ಪ ಸಂಖ್ಯಾತರ ಘಟಕದ ಪದಾಧಿಕಾರಿಗಳಿಗೆ ಯಾವುದೇ ಅಧಿಕಾರ ಇಲ್ಲ, ಗೌರವವಿಲ್ಲ ಹಾಗಾದರೆ ವಿಧಾನಸಭಾ ಚುನಾವಣೆಯಲ್ಲಿ ನಮ್ಮಜನರ ಮತಗಳು ಯಾವ ದಿಶೆಯಲ್ಲಿ ಕೇಳಬೇಕು ಎಂಬುವದು ಮುಜುಗರವಾಗುತ್ತಿದೆ. ರಾಜ್ಯದ ವರಿಷ್ಠರಿಗೆ ಜಿಲ್ಲೆಯ ತಪ್ಪು ಮಾಹಿತಿಯನ್ನು ನೀಡುತ್ತಿರುವದು ಕಂಡುಬರುತ್ತಿದೆ. ಉದಾ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ 28000 ಮತಗಳು ಬಿದ್ದಿವೆ ಎಂದು ಹೇಳಿ ಜಾರಿಕೊಳ್ಳುವ ಪ್ರಯತ್ನ ಮಾಡಲಾಗಿದೆ.ನಮ್ಮಪಕ್ಷಕ್ಕೆ ದೊರೆತದ್ದು 12500 ಮತಗಳು ಮಾತ್ರ. ಜಿಲ್ಲಾ ಅಧ್ಯಕ್ಷರು & ಪದಾಧಿಕಾರಿಗಳು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸದೆ ಇರುವದು ಸೋಲಿಗೆ ಕಾರಣವಾಗಿದೆ. ಈ ಹೊಣೆ ಹೊತ್ತು ಸ್ವ-ಇಚ್ಛೆಯಿಂದ ರಾಜಿನಾಮೆ ನೀಡಬೇಕಾಗಿತ್ತು.ಅದನ್ನು ಬಿಟ್ಟು ವಿಧಾನಸಭಾ ಚುನಾವಣೆ ಎದುರಿಸಲು ಯಾವ ನೈತಿಕತೆ ಹೊತ್ತು ಹೊರಟಿದ್ದಾರೋ ತಿಳಿಯದು. ಪಕ್ಷದ ರಾಜ್ಯ ಯುವ ಮುಖಂಡರಾದ ಪ್ರಜ್ವಲ ರೇವಣ್ಣ ಸಂಸದರು ಹಾಗೂ ನಿಖಿಲ ಕುಮಾರಸ್ವಾಮಿ ಯುವ ಘಟಕದ ರಾಜ್ಯಾಧ್ಯಕ್ಷರಿಗೆ ಪ್ರಚಾರಕ್ಕೆ ಜಿಲ್ಲಾ ಅಧ್ಯಕ್ಷರು ಮಾಹಿತಿ ನೀಡದೆ ಇರುವದು ಸ್ಥಳೀಯ ಚುನಾವಣೆಯಲ್ಲಿ ಸೋಲಿಗೆ ಕಾರಣವಾಗಿದೆ.ನಗರ ಘಟಕದ ಅಧ್ಯಕ್ಷರಾದ ರಾಜು ಹಿಪ್ಪರಗಿ ಇವರು ಚುನಾವಣೆ ಸಂದರ್ಭದಲ್ಲಿ ರಾಜಿನಾಮೆ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.
ಪಕ್ಷದ ಕಛೇರಿಯಲ್ಲಿ ಸಂಘಟನಾ ಚಟುವಟಿಕೆ ಇಲ್ಲದೆ ಮೂಕ ಸ್ಥಬ್ಧವಾಗಿದೆ.ಅಲ್ಪಸಂಖ್ಯಾತರ ಘಟಕದ ರಾಜ್ಯದಲ್ಲಿ ಪ್ರಮುಖ ಪಾತ್ರವಾಗಿದೆ.ವಿಜಯಪುರ ಜಿಲ್ಲೆಯ ಅಲ್ಪಸಂಖ್ಯಾತರು ನಿರ್ಣಾಯಕರಾಗಿದ್ದರು. ಕೂಡಾ ಗಮನಹರಿಸುತ್ತಿಲ್ಲ.ರಾಜ್ಯದಲ್ಲಿ 2023ಕ್ಕೆ ಜೆಡಿಎಸ್ ಅಧಿಕಾರಕ್ಕೆ ತರುವ ನಮ್ಮೆಲ್ಲರ ಕನಸಾಗಿದೆ.ಮಾನ್ಯ ಎಚ್. ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ಖಚಿತ. ಆದ್ದರಿಂದ ಅಲ್ಪ ಸಂಖ್ಯಾತರ ಸಮುದಾಯಕ್ಕೆ ನಮ್ಮ ಪಕ್ಷಕ್ಕೆ ಕರೆತರಲು ಜಿಲ್ಲೆಯಲ್ಲಿ ಮುಸ್ಲಿಂ ಅಭ್ಯರ್ಥಿ ಗುರುತಿಸುವುದು ಅನಿವಾರ್ಯವಾಗಿದೆ. ನಗರದಲ್ಲಿ ಅಧಿಕ ಮುಸ್ಲಿಂ ಮತಗಳು ಇದ್ದ ಕಾರಣ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸೂಚನೆ ನೀಡಿದ್ದಾರೆ. ಆದರೂ ನಗರದಲ್ಲಿ ಅಭ್ಯರ್ಥಿಯನ್ನು ಅಂತಿಮಗೊಳಸದೇ ಇರುವುದು ಚರ್ಚೆಗೆ ಗ್ರಾಸವಾಗಿದೆ ಎಂದರು. ಅಲ್ಪಸಂಖ್ಯಾತ ಘಟಕದ ಕಾರ್ಯಾಧ್ಯಕ್ಷರಾದ ಜಾಕೀರ ಹುಸೇನ ಲಾಹೋರಿ ತಾಳಿಕೋಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.










