
ವಿಜಯಪುರ: ಉತ್ತರ ಕರ್ನಾಟಕದ ಸಮಗ್ರ ನೀರಾವರಿಗಾಗಿ ಭಾರತೀಯ ಕಿಸಾನ್ ಸಂಘವು ಜನವರಿ 31ರಂದು ವಿಜಯಪುರದಲ್ಲಿ ಬೃಹತ್ ಹೋರಾಟ ಸಮಾವೇಶ ಹಮ್ಮಿಕೊಂಡಿದೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಕಿಸಾನ್ ಸಂಘದ ರಾಜ್ಯಾಧ್ಯಕ್ಷ ಭೀಮಸೇನ್ ಕೋರೆ, “ನೀರಾವರಿ ಯೋಜನೆಗೆ 2 ಲಕ್ಷ ಕೋಟಿ ರೂಪಾಯಿ ಮೀಸಲಾಗಿಸುವುದಾಗಿ ಸರ್ಕಾರ ಹೇಳಿದರೂ, ಇದುವರೆಗೆ 10 ರೂಪಾಯಿ ಕೂಡ ನೀಡಿಲ್ಲ. ಇದು ಕೂಡಲೇ ಅನುಷ್ಠಾನಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಹೋರಾಟಕ್ಕೆ ರೈತರಿಂದ ಭಾರಿ ಬೆಂಬಲ ಸಿಗುವ ನಿರೀಕ್ಷೆ ಇರುವುದರಿಂದ, ವಿಜಯಪುರ ನಗರದಲ್ಲಿ ಬೃಹತ್ ಪ್ರತಿಭಟನೆಯು ನಡೆಯಲಿದೆ.










