
ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ಪ್ರವೀಣ ನಾಗನಾಥ ಮೊಜಗೊಂಡ (32) ದುರಂತವಾಗಿ ಮೃತಪಟ್ಟಿದ್ದಾರೆ.ಮೃತ ಪ್ರವೀಣ ಕೆಪಿಆರ್ ಶುಗರ್ ಫ್ಯಾಕ್ಟರಿ ಹತ್ತಿರದ ಕೆ.ಡಿ ಗ್ರಾಮದಲ್ಲಿ ಬಿ-ಗ್ರೇಡ್ ಮಿಸ್ತ್ರಿ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ರಾತ್ರಿ ಕೆಲಸ ಮುಗಿಸಿ ಇಂದು ಬೆಳಗ್ಗೆ ಸುಮಾರು 5:30ರ ಹೊತ್ತಿಗೆ ತಮ್ಮ ಗ್ರಾಮ ಲಚ್ಯಾಣಕ್ಕೆ ತೆರಳುವಾಗ, ತೆಗ್ಗೀಹಳ್ಳಿ ಕ್ರಾಸ್ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮರಣ ಹೊಂದಿದ್ದಾರೆ.
ಅಪಘಾತದ ಬಳಿಕ ಅಪರಿಚಿತ ವಾಹನ ಹಾಗೂ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾರೆ.ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತನ ಅಕಾಲಿಕ ಸಾವು ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.










