ವಿಜಯಪುರ ನಗರದಲ್ಲಿ ಅತಿಕ್ರಮಣ ತೆರವು ಕಾರ್ಯಚರಣೆ ಮುಂದುವರೆದಿದ್ದು, ಮಹಾನಗರ ಪಾಲಿಕೆಯ ಅಧಿಕಾರಿಗಳು ಇಂದು ನೆಹರೂ ಮಾರುಕಟ್ಟೆಯ ನಂತರ, ಜುಮ್ಮಾ ಮಸೀದಿ ರಸ್ತೆಯಿಂದ ಶೆಡಜಿ ಮಲ್ಲೆ ತೋಟದವರೆಗೆ ಕಾರ್ಯಾಚರಣೆ ನಡೆಸಿದರು. ಈ ವೇಳೆ, ಹಲವು ಅನಧಿಕೃತ ಕಟ್ಟಡಗಳನ್ನು ಬುಲ್ಲೋಜರ್ ಮೂಲಕ ನೆಲಸಮಗೊಳಿಸಲಾಯಿತು.
ಕಾರ್ಯಾಚರಣೆ ಕೆಂದ್ರೀಕರಿಸಲಾಗಿದ್ದ ಪ್ರದೇಶಗಳಲ್ಲಿ ಕುಂಬಾರ ಗಲ್ಲಿಯ ಮುಖ್ಯ ರಸ್ತೆಯಿಂದ ದಿವಟಗೇರಿ ಗಲ್ಲಿಯ ಕ್ರಾಸ್‌ವರೆಗೆ ಅಕ್ರಮ ಕಟ್ಟಡಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಮಹಾನಗರ ಪಾಲಿಕೆಯು ಈಗಾಗಲೇ ಈ ಕಟ್ಟಡಗಳಿಗೆ ಗುರುತು ಹಾಕಿ ನೋಟಿಸ್ ನೀಡಿದ್ದರೂ, ಪ್ರತ್ಯುತ್ತರ ನೀಡದ ಹಿನ್ನೆಲೆ ಇಂದು ತೆರವು ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಯಿತು.
ಮಹಾನಗರ ಪಾಲಿಕೆಯ ಅಧಿಕಾರಿಗಳು ಜನರಿಗೆ ಕಾನೂನು ಪಾಲನೆ ಮಾಡುವಂತೆ ಕಿವಿಮಾತು ಹೇಳಿದರು ಮತ್ತು ನಗರ ಸುಂದರತೆಯ ಏಕೀಕರಣಕ್ಕಾಗಿ ಈ ಕ್ರಮ ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.











