ವಿಜಯಪುರ ತಾಲೂಕಿನ ಜಂಬಗಿ ಗ್ರಾಮದಲ್ಲಿ ದಾಳಿಂಬೆ ಬೆಳೆಯುವ ರೈತ ಸುಭಾಸ ಹಿಟ್ನಳ್ಳಿ ಮತ್ತು ಗುರಪ್ಪಾ ಹಿಟ್ನಳ್ಳಿ ಸಹೋದರರು ವಂಚನೆಗೊಳಗಾದ ಘಟನೆ ನಡೆದಿದೆ. ತಮ್ಮ ಮೂರು ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆಯುತ್ತಿದ್ದ ರೈತರ ಬಳಿ ದಾವಣಗೆರೆ ಮೂಲದ ರಫೀಕ್ ಶೇಖ್ ಸೇರಿದಂತೆ ನಾಲ್ವರು ಖದೀಮರು ಖರೀದಿ ಮಾಡುವ ನೆಪದಲ್ಲಿ ಬಂದಿದ್ದರು.
ಖದೀಮರು ಆರಂಭದಲ್ಲಿ ದಾಳಿಂಬೆಗೆ ಅರ್ಧ ಹಣವನ್ನು ನೀಡಿ, ಉಳಿದ ಹಣವನ್ನು ಹಿಂದುಗಡೆ ನೀಡುವುದಾಗಿ ಹೇಳಿ ರೈತರಿಂದ 6.5 ಲಕ್ಷ ರೂ. ವಂಚನೆ ಮಾಡಿ ಪರಾರಿಯಾಗಿದ್ದಾರೆ.
ಈ ಕುರಿತು ರೈತರು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಂಚನೆಗೊಳಗಾದ ರೈತರು ಈ ಘಟನೆಯನ್ನು ಕೃಷಿ ಬಾಳಿಗೆ ದೊಡ್ಡ ಆಘಾತವೆಂದು ಹೇಳಿದ್ದಾರೆ.











