ನಾವು ಯಾವುದೇ ಆಪರೇಶನ್ ಹಸ್ತ ಮಾಡುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷರಾದಿಯಾಗಿ ನಾವೆಲ್ಲಾ ಸ್ಪಷ್ಟನೆ ನೀಡಿದ್ದೇವೆ ಎಂದು ಸಚಿವ ಎಂ ಬಿಪಾಟೀಲ ಹೇಳಿದರು. ವಿಶೇಷವಾಗಿ ರಾಜ್ಯದಲ್ಲಿ ಬಿಜೆಪಿ ಮುಳುಗುವ ಹಡಗು, ಜನ ಅವರನ್ನ ತಿರಸ್ಕಾರ ಮಾಡಿದ್ದಾರೆ, ಹೀಗಾಗಿ ಅಲ್ಲಿಯ ಬಹಳಷ್ಟು ಜನ ನಾಯಕರು ಕಾರ್ಯಕರ್ತರು ಬೇಸತ್ತು ಹೋಗಿದ್ದಾರೆ ಅಲ್ಲಿ ಉಸಿರುಗಟ್ಟುವ ವಾತಾವರಣ ಅಲ್ಲಿದೆ ಎಂದು ಸಚಿವ ಎಂ ಬಿ ಪಾಟೀಲ ಹೇಳಿದರು.








