
ಇಂಡಿ.ತಾಲೂಕೀನ ಬಬಲಾದ ಗ್ರಾಮದಲ್ಲಿ ಶ್ರೀ ಕನಕದಾಸ ಹಾಗೂ ಪುನೀತ್ ರಾಜ್ ಕುಮಾರ್ ಅವರ 2ವರ್ಷದ ಪುಣ್ಯ ಸ್ಮರಣೆ ಹಾಗೂ ರಾಜ್ಯೋತ್ಸವ ಅಂಗವಾಗಿ, ಕನಕದಾಸ ಸೇವಾ ಸಂಘದ ಅಡಿಯಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟನೆಯನ್ನು ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ನೇರವೇರಿಸಿದರು.ನಂತರ ಮಾತನಾಡುತ್ತಾ, ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಿಂತಾ ಮಹನೀಯರ ಪುಣ್ಯ ಸ್ಮರಣೆ ಸಮಾರಂಭದಲ್ಲಿ ಸತ್ಕಾರ ಮಾಡಿ ಗೌರವಿಸುವುದು ಶ್ಲಾಘನೀಯ.ಪ್ರತಿಯೂಬ ಯುವಕರು ಭವಿಷ್ಯದ ಭಾರತದ ನಿರ್ಮಾತಕರು ಹಿಂತಾ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕನಕದಾಸರ , ಹಾಗೂ ಪುನೀತ್ ರಾಜ್ ಕುಮಾರ್ ರವರ ಬದುಕು ಅವರ ಜೀವನ ಸಂದೇಶವನ್ನು ಮಕ್ಕಳಿಗೆ ಹಿಂತಾ ಕಾರ್ಯಕ್ರಮಗಳು ಉತ್ಸಾಹ ಹಾಗೂ ಪ್ರೇರಣೆ ನೀಡಲಿ ಎಂದು ಮಾತನಾಡಿದರು.ವೇದಿಕೆಯ ಮೇಲೆ ಅಧ್ಯಕ್ಷತೆಯನ್ನು ಪುಂಡಲಿಕ ಪಾಟೀಲ ವಹಿಸಿದ್ದರು, ಪ್ರಾಸ್ತಾವಿಕವಾಗಿವಾಗಿ ಸಂಘದ ಅಧ್ಯಕ್ಷರಾದ ಎಲ್ಲಗೋಂಡ ಪೂಜಾರಿ ಮಾತನಾಡಿದರು,ತಾಲೂಕಾ ಪಂಚಾಯತ ಮಾಜಿ ಸದಸ್ಯರಾದ ಗಂಗಾಧರ ಗೌಡ ಬಿರಾದಾರ,ಡಿ ಸಿ ಸಿ ಬ್ಯಾಂಕಿನ ನಿರ್ದೇಶಕ ಅರವಿಂದ್ ಪೂಜಾರಿ,ಸಿ ಬಿ ಉಮರಾಣಿ, ಆರ್ ಪಿ ಮೀಸಾಳೆ, ಕುಮಾರ್.ಸುರ್ಗಳ್ಳಿ, ರೇವಪ್ಪಸಾವುಕಾರ ಬಿರಾದಾರ,ರುಪ್ಪಣ್ಣ ಬಿರಾದಾರ,ಅಮಸಿದ್ದ ಪೂಜಾರಿ, ನಾಗಣ್ಣ ಪೂಜಾರಿ, ರೇವಣಸಿದ್ದ ಪೂಜಾರಿ,ಶಿವು ಪೂಜಾರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು











