ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಿದ್ದಾರೆ.ಸತತ 2ನೇ ಬಾರಿಗೆ ಸಿದ್ದರಾಮಯ್ಯಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. 2013ರಲ್ಲಿ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿಗಳಾಗಿ ಬರೋಬ್ಬರಿ 5 ವರ್ಷಗಳ ಪೂರ್ಣಾವಧಿ ಸಿಎಂ ಆಗಿ ದಾಖಲೆ ಬರೆದಿದ್ದರು.ದೇವರಾಜು ಅರಸು ಬಳಿಕ ಪೂರ್ಣಾವಧಿ ಸಿಎಂ ಆಗಿ ಅಧಿಕಾರ ನಡೆಸಿದ್ದ ಮತ್ತೋರ್ವ ಸಿಎಂ ಎಂಬ ಹೆಗ್ಗಳಿಗೆ ಗಳಿಸಿದ್ರು, ಇದೀಗ ಮತ್ತೊಮ್ಮೆಸಿದ್ದರಾಮಯ್ಯಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.










