ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಆಘಾತಕಾರಿ ಹತ್ಯೆ ನಡೆದಿದೆ. ಆಲಮಟ್ಟಿ ರಸ್ತೆ ಪಕ್ಕದಲ್ಲಿರುವ ಚಲಮಿ ತಾಂಡಾ ವ್ಯಾಪ್ತಿಯ ಮನೆಯೊಂದರ ಹೊರಾಂಗಣದಲ್ಲಿ ಶಂಕ್ರಪ್ಪ ಕಾಳಪ್ಪ ಬಡಿಗೇರ (58) ಅವರ ಶವ ಪತ್ತೆಯಾಗಿದೆ. ಅವರು ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಹಗರಟಗಿ ಗ್ರಾಮದ ನಿವಾಸಿಯಾಗಿದ್ದರು.
ಮೃತ ದೇಹದ ತಲೆಯ ಹಿಂಭಾಗದಲ್ಲಿ ಭೀಕರ ಗಾಯಗಳಿದ್ದು, ರಕ್ತದ ಮಡುವುಗಳು ಆತಂಕ ಹುಟ್ಟಿಸಿವೆ. ಹತ್ಯೆ ಹೇಗೆ ನಡೆದಿದೆ ಎಂಬುದರ ಬಗ್ಗೆ ಇನ್ನು ಸ್ಪಷ್ಟತೆಯಾಗಿಲ್ಲ. ಸ್ಥಳೀಯರು ಈ ಘಟನೆ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ. ಈ ಹತ್ಯೆ ಪ್ರಕರಣ ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.










