
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಮಹಾನಗರಪಾಲಿಕೆ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಜಿ. ಪಂ ಸಭಾಂಗಣದಲ್ಲಿ ಸಚಿವ ಎಂ ಬಿ ಪಾಟೀಲ ಅವರು ನಡೆಸಿದರು. ತೆರೆದಬಾವಿ, ಕೊಳವೆ ಬಾವಿ, ಐತಿಹಾಸಿಕ ಬಾವಡಿಗಳ ನೀರನ್ನು ಪೂರೈಸಲು ಅಗತ್ಯ ಯೋಜನೆ ರೂಪಿಸುವಂತೆ ಕಳೆದ ತಿಂಗಳು ಸೂಚನೆ ನೀಡಿದ್ದರು. ಈ ಕುರಿತು ಇಂದು ಪರಾಮರ್ಶಿಸಿದರು. ಬೇಸಿಗೆ ದಿನಗಳಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.









