• About
  • Contact
  • Privacy & Policy
  • Disclaimer
  • Terms and Conditions
I Today News
  • Home
  • Karnataka
  • Indi
  • Bijapur
  • Bagewadi
  • Muddebihal
  • Sindagi
  • National
  • Youtube Videos
No Result
View All Result
  • Home
  • Karnataka
  • Indi
  • Bijapur
  • Bagewadi
  • Muddebihal
  • Sindagi
  • National
  • Youtube Videos
No Result
View All Result
I Today News
I TODAY NEWS
No Result
View All Result
Home Bijapur

ಮಾಧ್ಯಮಗಳು ವಸ್ತು ನಿಷ್ಠ ವರದಿ ಮಾಡಬೇಕು. ಟಿ ಆರ್ ಪಿ ಹೆಚ್ಚಳಕ್ಕಾಗಿ,ಪತ್ರಿಕೆಗಳ ಮಾರಾಟಕ್ಕೆಂದೆ ವರದಿಗಳನ್ನು ಮಾಡಬಾರದು, ಜಿಲ್ಲಾಧಿಕಾರಿ ವಿಜಯಮಹಾಂತೇಶ ಬಿ. ದಾನಮ್ಮನವರ

I Today News by I Today News
July 23, 2022
in Bijapur, karnataka, News
0
ಮಾಧ್ಯಮಗಳು ವಸ್ತು ನಿಷ್ಠ ವರದಿ ಮಾಡಬೇಕು. ಟಿ ಆರ್ ಪಿ ಹೆಚ್ಚಳಕ್ಕಾಗಿ,ಪತ್ರಿಕೆಗಳ ಮಾರಾಟಕ್ಕೆಂದೆ ವರದಿಗಳನ್ನು ಮಾಡಬಾರದು, ಜಿಲ್ಲಾಧಿಕಾರಿ ವಿಜಯಮಹಾಂತೇಶ ಬಿ. ದಾನಮ್ಮನವರ
0
SHARES
116
VIEWS
Share on FacebookShare on Twitter

ವಿಜಯಪುರದಲ್ಲಿ ಪತ್ರಿಕಾ ದಿನಾಚರಣೆ, ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಲೇಖನಿ ಖಡ್ಗಕ್ಕಿಂತ ಹರಿತವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸಿವೆ. ಸಾರ್ವಜನಿಕರ ಕಣ್ಣು ಮತ್ತು ಕಿವಿಯಾಗಿ ಪತ್ರಿಕೆಗಳು ಕೆಲಸ ಮಾಡುತ್ತಿವೆ. ಸರಕಾರದ ಲೋಪದೋಷಗಳನ್ನು ಹೋಗಲಾಡಿಸಲು ಕಾವಲುಗಾರನಂತೆ ಕೆಲಸ ಮಾಡುತ್ತಿವೆ. ಪ್ರಜಾಪ್ರಭುತ್ವವನ್ನು ಸಕ್ರೀಯಗೊಳಿಸುವಲ್ಲಿಯೂ ಇವು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು. ಈಗ ವಸ್ತು ನಿಷ್ಠ ವರದಿ ಹೆಚ್ಚಾಗಬೇಕಿದೆ. ಟಿ ಆರ್ ಪಿ ಹೆಚ್ಚಳಕ್ಕಾಗಿ ಮತ್ತು ದಿನಪತ್ರಿಕೆಗಳ ಮಾರಾಟ ಸಂಖ್ಯೆ ಹೆಚ್ಚಳಕ್ಕಾಗಿ ಅತೀ ರಂಜಿತ ವರದಿಗಳನ್ನು ಮಾಡಬಾರದು. ಹಲವು ಬಾರಿ ಸುದ್ದಿಗಳ ವೈಭವೀಕರಣದಿಂದ ದೇಶದ ಆಂತರಿಕ ಭದ್ರತೆಗೂ ಆತಂಕ ತಂದೊಡ್ಡುವಂತಾಗುತ್ತಿದೆ. ಎಂದು ಈ ಹಿಂದೆ ಮುಂಬೈನಲ್ಲಿ ನಡೆದ ಭಯೋತ್ಪಾದಕರ ಧಾಳಿ ಕುರಿತು ಧಾಳಿಯ ವಿದ್ಯುನ್ಮಾನ ಮಾಧ್ಯಮಗಳು ಮಾಡಿದ ವರದಿ ಹಾಗೂ ಈ ಕುರಿತು ಸುಪ್ರೀಂ ಕೋರ್ಟಿನಲ್ಲಿ ವ್ಯಕ್ತವಾದ ಅಭಿಪ್ರಾಯದ ಕುರಿತು ಅವರು ಬೆಳಕು ಚೆಲ್ಲಿದರು.

ಭದ್ರತೆ ಮತ್ತು ಅತ್ಯಾಚಾರದಂಥ ವರದಿಗಳನ್ನು ಮಾಡುವಾಗ ಮಾಧ್ಯಮಗಳಿಗೆ ಸೂಕ್ಷ್ಮತೆ ಇರಬೇಕು. ಇಂಥ ಪ್ರಕರಣಗಳ ಬಗ್ಗೆ ವಿಚಾರಣೆ ರೀತಿಯಲ್ಲಿ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತವೆ. ಇದು ಸರಿಯಲ್ಲ. ಅಪರಾಧವನ್ನು ಸಾಬೀತು ಪಡಿಸುವುದು ನ್ಯಾಯಾಂಗದ ಜವಾಬ್ದಾರಿಯಾಗಿದೆ. ಪ್ರಕರಣಗಳ ಅಂಕಿ- ಅಂಶಗಳನ್ನು ಮಾಧ್ಯಮಗಳು ಜನರ ಮುಂದಿಡಬೇಕೇ ಹೊರತು ತಾವೇ ವಿಚಾರಣೆ ನಡೆಸುವಂತಿರಬಾರದು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಪತ್ರಕರ್ತರ ಸ್ವಾತಂತ್ರ್ಯ ವಿಚಾರದಲ್ಲಿ ವಿಶ್ವದ ಒಟ್ಟು 180 ರಾಷ್ಟ್ರಗಳಲ್ಲಿ ಭಾರತದ 140ನೇ ಸ್ಥಾನ ಪಡೆದಿದೆ. ಸುದ್ದಿ ಪಾರದರ್ಶಕವಾಗಿರಬೇಕು. ಅಷ್ಟೇ ಅಲ್ಲ, ಜವಾಬ್ದಾರಿಯುತವಾಗಿ ವಸ್ತುನಿಷ್ಠವಾಗಿರಬೇಕು. ಕೋಮು ಗಲಭೆಯಂಥ ಸಂದರ್ಭಗಳು ಸೇರಿದಂತೆ ಇತರ ಸುದ್ದಿಗಳ ವಿಚಾರದಲ್ಲಿ ನಿಷ್ಪಕ್ಷಪಾತ ವರದಿ ಮಾಡಬೇಕು ಎಂದು ಅವರು ಹೇಳಿದರು. ಮಾಧ್ಯಮಗಳು ಸ್ವತಂತ್ರವಾಗಿ ಕೆಲಸ ಮಾಡಬೇಕು. ಈ ಕೆಲಸ ಮಾಡಬೇಕಾದರೆ ಆ ಮಾಧ್ಯಮ ಸಂಸ್ಥೆಗಳು ಆರ್ಥಿಕವಾಗಿ ಸದೃಢವಾಗಿರಬೇಕು. ಸುದ್ದಿ ಸಂಸ್ಥೆಗಳ ಮಾಲಿಕರು ಯಾವುದೇ ಒತ್ತಡಕ್ಕೊಳಗಾಗಬಾರದು ಎಂದು ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದರು. ಈ ಸಂದರ್ಭದಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ, ಎಎಸ್ಪಿ ಡಾ. ರಾಮಲಕ್ಷ್ಮಣ ಅರಸಿದ್ದಿ, ಪೌರಾಯುಕ್ತ ವಿಜಯ ಮೆಕ್ಕಳಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲಿಕ ಬಾಳೋಜಿ, ಹಿರಿಯ ಪತ್ರಕರ್ತರಾದ ಸುಭಾಷ ಹೂಗಾರ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಡಿ. ಬಿ. ವಡವಡಗಿ, ಮೋಹನ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.

ವರದಿ: ಲಾಲಸಾಬ ಸವಾರಗೋಳ I Today News ವಿಜಯಪುರ

Tags: Bijapur newsBreaking newsi today newsi today news indii today news kannadaLatest newsVijayapur news
Previous Post

ಸವರ್ಣಿಯರಿಂದ ದಲಿತರ ಮೇಲೆ ಹಲ್ಲೆ :ಹಾಗೂ ಜಾತಿ ನಿಂದನೆ

Next Post

ಇಂಡಿಯಲ್ಲಿ ಸಿದ್ದರಾಮೋತ್ಸವದ ಪೂರ್ವಭಾವಿ ಸಭೆ

I Today News

I Today News

Next Post
ಇಂಡಿಯಲ್ಲಿ ಸಿದ್ದರಾಮೋತ್ಸವದ ಪೂರ್ವಭಾವಿ ಸಭೆ

ಇಂಡಿಯಲ್ಲಿ ಸಿದ್ದರಾಮೋತ್ಸವದ ಪೂರ್ವಭಾವಿ ಸಭೆ

Leave a Reply Cancel reply

Your email address will not be published. Required fields are marked *

Stay Connected test

  • 86.9k Followers
  • 23.9k Followers
  • 99 Subscribers
  • Trending
  • Comments
  • Latest
ಇಂಡಿ ತಾಲ್ಲೂಕಿನಲ್ಲಿ ಅಪಘಾತ – ಬೈಕ್ ಸವಾರ ಸ್ಥಳದಲ್ಲೇ ಮೃತ

ಇಂಡಿ ತಾಲ್ಲೂಕಿನಲ್ಲಿ ಅಪಘಾತ – ಬೈಕ್ ಸವಾರ ಸ್ಥಳದಲ್ಲೇ ಮೃತ

August 30, 2025
ಇಂಡಿಯಲ್ಲಿ ಸುಗಮ ಸಂಚಾರಕ್ಕಾಗಿ ಜೆಸಿಬಿ ಘರ್ಜನೆ

ಇಂಡಿಯಲ್ಲಿ ಸುಗಮ ಸಂಚಾರಕ್ಕಾಗಿ ಜೆಸಿಬಿ ಘರ್ಜನೆ

August 9, 2024
ಭೀಮಾತೀರದಲ್ಲಿ ಅಕ್ರಮ ಚಟುವಟಿಕೆ ಕಡಿವಾಣಕ್ಕೆ ADGP ಅಲೋಕಕುಮಾರ ಭೇಟಿ

ಭೀಮಾತೀರದಲ್ಲಿ ಅಕ್ರಮ ಚಟುವಟಿಕೆ ಕಡಿವಾಣಕ್ಕೆ ADGP ಅಲೋಕಕುಮಾರ ಭೇಟಿ

July 20, 2022
ಅಕ್ರಮ ಅಕ್ಕಿ ಸಾಗಾಟ ಆರೋಪ ಸಾಬೀತು ಮುಖ್ಯಶಿಕ್ಷಕ ಶರಣಪ್ಪ ಅಮಾನತು

ಅಕ್ರಮ ಅಕ್ಕಿ ಸಾಗಾಟ ಆರೋಪ ಸಾಬೀತು ಮುಖ್ಯಶಿಕ್ಷಕ ಶರಣಪ್ಪ ಅಮಾನತು

June 11, 2022

ಕಾಂಗ್ರೆಸ್ ಪಕ್ಷದ ಸಹವಾಸ ಮಾಡಿದ ಪಕ್ಷ ಉಳಿಯಲ್ಲ: ಎಂಪಿ

4
ನಾವು ಸೋಮಣ್ಣರನ್ನು ಕಾಂಗ್ರೆಸ್ ಗೆ ಕರೆದಿಲ್ಲ: ಡಿಕೆಶಿ

ನಾವು ಸೋಮಣ್ಣರನ್ನು ಕಾಂಗ್ರೆಸ್ ಗೆ ಕರೆದಿಲ್ಲ: ಡಿಕೆಶಿ

3

 ಬಿಸಿ ಊಟದ ಜೊತೆ ಗುಲಾಬ್-ಜಾಮೂನ

1
ಇಂಡಿಯಲ್ಲಿ ಸುಗಮ ಸಂಚಾರಕ್ಕಾಗಿ ಜೆಸಿಬಿ ಘರ್ಜನೆ

ಇಂಡಿಯಲ್ಲಿ ಸುಗಮ ಸಂಚಾರಕ್ಕಾಗಿ ಜೆಸಿಬಿ ಘರ್ಜನೆ

1
ಬಬಲೇಶ್ವರದಲ್ಲಿ KSRTC ಬಸ್ ಡಿಕ್ಕಿ — ಬೈಕ್ ಸವಾರ ಗಂಭೀರ ಗಾಯ

ಬಬಲೇಶ್ವರದಲ್ಲಿ KSRTC ಬಸ್ ಡಿಕ್ಕಿ — ಬೈಕ್ ಸವಾರ ಗಂಭೀರ ಗಾಯ

February 26, 2026
ಕರ್ನಾಟಕ ಕಾಂಗ್ರೆಸ್ ಸಿಎಂ ಕುರ್ಚಿ ವಿಚಾರಕ್ಕೆ ಅಂತ್ಯವಾ? ಖರ್ಗೆ ಸ್ಪೋಟಕ ಹೇಳಿಕೆ ಸಂಚಲನ

ಕರ್ನಾಟಕ ಕಾಂಗ್ರೆಸ್ ಸಿಎಂ ಕುರ್ಚಿ ವಿಚಾರಕ್ಕೆ ಅಂತ್ಯವಾ? ಖರ್ಗೆ ಸ್ಪೋಟಕ ಹೇಳಿಕೆ ಸಂಚಲನ

February 26, 2026
ಕರ್ನಾಟಕದಲ್ಲಿ 3 ತಿಂಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ | ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ

ಕರ್ನಾಟಕದಲ್ಲಿ 3 ತಿಂಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ | ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ

February 25, 2026
ಸಿಂದಗಿ PSI ಶ್ರೀಕಾಂತ್ ಕಾಂಬಳೆರಿಂದ ರೋಡ್ ರೋಮಿಯೋಗಳಿಗೆ ಎಚ್ಚರಿಕೆ

ಸಿಂದಗಿ PSI ಶ್ರೀಕಾಂತ್ ಕಾಂಬಳೆರಿಂದ ರೋಡ್ ರೋಮಿಯೋಗಳಿಗೆ ಎಚ್ಚರಿಕೆ

February 20, 2026

Recent News

ITodayNews

I TodayNews is a Daily Free News Website ,user can get Live Update News around the world and Namma Karnataka, bring the latest news and information to viewers

Follow Us

Browse by Category

  • Bagewadi
  • Bijapur
  • Business
  • Chadchan/Naghtan
  • Devar Hipparagi
  • Education
  • Entertainment
  • Health
  • indi
  • karnataka
  • Muddebihal
  • National
  • News
  • Newsbeat
  • Politics
  • Science
  • Sindagi
  • Sports
  • Stories
  • Tech
  • Uncategorized
  • World
  • Youtube Videos

Recent News

ಬಬಲೇಶ್ವರದಲ್ಲಿ KSRTC ಬಸ್ ಡಿಕ್ಕಿ — ಬೈಕ್ ಸವಾರ ಗಂಭೀರ ಗಾಯ

ಬಬಲೇಶ್ವರದಲ್ಲಿ KSRTC ಬಸ್ ಡಿಕ್ಕಿ — ಬೈಕ್ ಸವಾರ ಗಂಭೀರ ಗಾಯ

February 26, 2026
ಕರ್ನಾಟಕ ಕಾಂಗ್ರೆಸ್ ಸಿಎಂ ಕುರ್ಚಿ ವಿಚಾರಕ್ಕೆ ಅಂತ್ಯವಾ? ಖರ್ಗೆ ಸ್ಪೋಟಕ ಹೇಳಿಕೆ ಸಂಚಲನ

ಕರ್ನಾಟಕ ಕಾಂಗ್ರೆಸ್ ಸಿಎಂ ಕುರ್ಚಿ ವಿಚಾರಕ್ಕೆ ಅಂತ್ಯವಾ? ಖರ್ಗೆ ಸ್ಪೋಟಕ ಹೇಳಿಕೆ ಸಂಚಲನ

February 26, 2026
© 2024 I Today News - Designed and Maintained by OnNets Technology Services.
  • About
  • Contact
  • Privacy & Policy
  • Disclaimer
  • Terms and Conditions

No Result
View All Result
  • Home
  • karnataka
  • Indi
  • Bijapur
  • Bagewadi
  • Muddebihal
  • Sindagi
  • National
  • Youtube Videos

WhatsApp us