
ಇಂಡಿ ಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಸದಸ್ಯತ್ವ ಅಭಿಯಾನ ಹಾಗೂ ಬೂತ್ ಮಟ್ಟದ ಕಾರ್ಯಕರ್ತರ ಅಭಿಯಾನದ ಉದ್ಘಾಟನೆ ನೆರವೇರಿಸಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ನಾನಾಗೌಡ ಬಿರಾದಾರ. ನಂತರ ಮಾತನಾಡುತ್ತಾ ಜೆಡಿಎಸ್ ಪಕ್ಷ ವಿಶೇಷವಾಗಿ ವಿಜಾಪೂರ ಜಿಲ್ಲೆಯ ನೀರಾವರಿ ಯೋಜನೆ ಅನುಷ್ಠಾನಕ್ಕೆ ಕ್ರಮಕೈಗೋಂಡ ಪಕ್ಷವಾಗಿದೆ. ಸನ್ಮಾನ್ಯ ಮಾಜಿ ಪ್ರಧಾನಿ ದೇವೇಗೌಡರು ಆಲಮಟ್ಟಿ ಅಣೆಕಟ್ಟೆಯ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಜನತಾ ಪಕ್ಷದ ಬೇರು ಇನ್ನು ಗಟ್ಟಿಯಾಗಿವೆ ಎಂಬುವುದಕ್ಕೆ 2023ರ ವಿಧಾನ ಸಭಾ ಚುನಾವಣೆಯಲ್ಲಿ ಬಿ ಡಿ ಪಾಟೀಲರಿಗೆ 62 ಸಾವಿರ ಮತಗಳು ಸಾಕ್ಷಿ .ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಗೆ ಕಾರ್ಯಕರ್ತರು ಸನ್ನದ್ಧವಾಗಿರಬೇಕು. ನಾಯಕರಾದ ಶ್ರೀ ಎಚ್ ಡಿ ಕುಮಾರಸ್ವಾಮಿಯವರ ನಾಯಕತ್ವ ನಮ್ಮಗೆ ಶ್ರೀರಕ್ಷೆ ಇದೆ ಎಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.ಜೆಡಿಎಸ್ ಮುಖಂಡರು 2023ರ ಅಭ್ಯರ್ಥಿಯಾದ ಬಿ ಡಿ ಪಾಟೀಲರು ಮಾತನಾಡುತ್ತಾ ಸದಸ್ಯತ್ವ ಅಭಿಯಾನ ನಮ್ಮ ಕಾರ್ಯಕರ್ತರಿಗೆ ಹೊಸ ಚೈತನ್ಯವನ್ನು ನೀಡುವಂತಾಗಿದೆ.ಬರಲಿರುವ ಜಿಲ್ಲಾ ಪಂಚಾಯತ್ ತಾಲೂಕಾ ಪಂಚಾಯತ ಚುನಾವಣಾಗೆ ಬೂತ್ ಮಟ್ಟದಲ್ಲಿ ಪಕ್ಷವನ್ನು ಗಟ್ಟಿ ಮುಟ್ಟಾದ ಕಾರ್ಯಕರ್ತರ ಪಡೆಯನ್ನು ಕಟ್ಟೋಣ, ನಮ್ಮ ನಾಯಕರಾದ ಕೇಂದ್ರ ಮಂತ್ರಿಗಳಾದ ಶ್ರೀ ಎಚ್ ಡಿ ಕುಮಾರಸ್ವಾಮಿವರ ಶ್ರೀರಕ್ಷೆ ಇದೆ, ಒಬ್ಬ ಬಡ ಕಾರ್ಯಕರ್ತರನ್ನು ಗುರ್ತಿಸುವ ನಾಯಕರಿದ್ದರೆ ಅದು ರಾಜ್ಯದಲ್ಲಿ ಕುಮಾರಸ್ವಾಮಿಯವರು ಮಾತ್ರ ವೇಂದು ಮಾತನಾಡಿದರು.ವೇದಿಕೆಯ ಮೇಲೆ ಅಯೂಬ್ ನಾಟೀಕರ, ಶ್ರೀಶೈಲಗೌಡ ಪಾಟೀಲ, ಶಿವುಕುಮಾರ ದೇವರ, ಬಸನಗೌಡ ಪಾಟೀಲ್, ರಮೇಶ ರಾಠೋಡ,ಮಹಿಬೂಬ ಬೇವನೂರ,ನಾನಾಗೌಡ ಪಾಟೀಲ, ಬಸನಗೌಡ ಬಿರಾದಾರ, ನಿಯಾಝ್ ಅಗರಖೇಡ ಮೌಲಾಸಾಬ ಅತನೂರ, ಸುನಂದಾ ವಾಲಿಕಾರ, ಯಶವಂತ ಕಾಡೆಗೋಳ, ಸಿದ್ದಪ್ಪ ಗುನ್ನಾಪೂರ,ಶಂಕರಗೌಡ ಬಿರಾದಾರ,ಅಲ್ಲಾ ಸಯ್ಯದ್,ಅಜೀತ ಕಾಂಬಳೆ, ದುಂಡು ಬಿರಾದಾರ,ಸಿದ್ದಾರಾಮ ಹಂಜಗಿ,ಮಾಳು ಮ್ಯಾಕೇರಿ,ಶಿವಾಜಿ ಭೀರಪಗೋಳ, ವಿಠಲ ಹಳ್ಳಿ,ಪದ್ಮಣ ರೂಗಿ,ಪಾಂಡುಗೌಡ ಉಪಸ್ಥಿತರಿದ್ದರು.










