• About
  • Contact
  • Privacy & Policy
  • Disclaimer
  • Terms and Conditions
I Today News
  • Home
  • Karnataka
  • Indi
  • Bijapur
  • Bagewadi
  • Muddebihal
  • Sindagi
  • National
  • Youtube Videos
No Result
View All Result
  • Home
  • Karnataka
  • Indi
  • Bijapur
  • Bagewadi
  • Muddebihal
  • Sindagi
  • National
  • Youtube Videos
No Result
View All Result
I Today News
I TODAY NEWS
No Result
View All Result
Home Bijapur

ನಾನು 24ಕ್ಯಾರೇಟ್ ಚಿನ್ನ, ನಾಡಗೌಡರಿಗೆ ಸಚಿವ ಸ್ಥಾನ ಕೇಳುವ ಹಕ್ಕಿಲ್ಲ: ಇಂಡಿ ಶಾಸಕ

I Today News by I Today News
October 28, 2025
in Bijapur, indi, News
0
ನಾನು 24ಕ್ಯಾರೇಟ್ ಚಿನ್ನ, ನಾಡಗೌಡರಿಗೆ ಸಚಿವ ಸ್ಥಾನ ಕೇಳುವ ಹಕ್ಕಿಲ್ಲ: ಇಂಡಿ ಶಾಸಕ
0
SHARES
167
VIEWS
Share on FacebookShare on Twitter

ವಿಜಯಪುರ: ಶಾಸಕರು ಸಚಿವ ಸ್ಥಾನ ಕೇಳಬಾರದು ಎಂದೇ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಹೀಗಾಗಿ ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡ ಅವರಿಗೆ ಈಗ ಸಚಿವ ಸ್ಥಾನ ಕೇಳುವ ಹಕ್ಕಿಲ್ಲ’ ಎಂದು ಇಂಡಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಯಶವಂತರಾಯಗೌಡ ಪಾಟೀಲ ತಿರುಗೇಟು ನೀಡಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿ.ಎಸ್‌.ನಾಡಗೌಡರು ಈಗಾಗಲೇ ಎರಡು ಬಾರಿ ಸಚಿವರಾಗಿದ್ದಾರೆ. ಅಲ್ಲದೇ, ಹಾಲಿ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನದಲ್ಲಿದ್ದಾರೆ. ಈಗ ಸಚಿವ ಸ್ಥಾನ ಕೇಳುವುದರಲ್ಲಿ ಅರ್ಥವಿಲ್ಲ’ ಎಂದರು.’ಇಂಡಿ ಮತಕ್ಷೇತ್ರಕ್ಕೆ ಇಲ್ಲಿಯವರೆಗೆ ಸಚಿವ ಸ್ಥಾನ ದೊರಕಿಲ್ಲ, ಈ ಕೊರತೆ ಮುಂಬರುವ ಸಚಿವ ಸಂಪುಟ ಪುನರ್‌ರಚನೆ ವೇಳೆ ನೀಗುವ ವಿಶ್ವಾಸವಿದೆ. ಪಕ್ಷದ ವರಿಷ್ಠರು ಈ ಹಿಂದೆ ನನಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನದ ಅವಕಾಶ ಬಂದಾಗ ನಯವಾಗಿ ತಿರಸ್ಕರಿಸಿದ್ದೇನೆ. ಈ ಹಿಂದೆ ಪಕ್ಷದ ವರಿಷ್ಠರು ಕೊಟ್ಟಿರುವ ಆಶ್ವಾಸನೆಯಂತೆ ಸಚಿವ ಸ್ಥಾನ ನೀಡಲಿ’ ಎಂದು ಹಕ್ಕೊತ್ತಾಯ ಮಾಡಿದರು.’40 ವರ್ಷಗಳ ಕಾಲ ನಮ್ಮ ಮನೆತನ ಕಾಂಗ್ರೆಸ್‌ ಪಕ್ಷದಲ್ಲಿ ರಾಜಕಾರಣ ಮಾಡಿದೆ. ನಾನು ಶುದ್ಧ ಕಾಂಗ್ರೆಸ್ಸಿಗ. 22 ಕ್ಯಾರೇಟ್ ಅಲ್ಲ; 24 ಕ್ಯಾರೇಟ್ ಶುದ್ಧ ಕಾಂಗ್ರೆಸ್ಸಿಗ, ನಾನು ಬೇರೆ ಪಕ್ಷದಿಂದ ಬಂದಿಲ್ಲ, ಇಲ್ಲಿಯೇ ಇರುವೆ. ಇದುವರೆಗೂ ಸಚಿವ ಸ್ಥಾನಮಾನ ಸಿಕ್ಕಲ್ಲ. ಆದರೆ, ಜಿಲ್ಲೆಯಲ್ಲಿ ಬೇರೆ ಪಕ್ಷದಿಂದ ಕಾಂಗ್ರೆಸ್‌ಗೆ ಬಂದವರಿಗೆ ಈಗಾಗಲೇ ಸಚಿವ ಸ್ಥಾನ ದೊರೆತಿದೆ’ ಎಂದು ಶಾಸಕ ಅಪ್ಪಾಜಿ ನಾಡಗೌಡ ಮತ್ತು ಸಚಿವ ಶಿವಾನಂದ ಪಾಟೀಲ ವಿರುದ್ದ ಪರೋಕ್ಷವಾಗಿ ಅಸಮಾದಾನ ಹೊರಹಾಕಿದರು.’ಮುಖ್ಯಮಂತ್ರಿಯವರು ಇತ್ತೀಚೆಗೆ ಇಂಡಿಗೆ ಬಂದಾಗ ನನ್ನ ಕ್ಷೇತ್ರದ ಜನತೆ ಸಚಿವ ಸ್ಥಾನದ ಬೇಡಿಕೆ ಮಂಡಿಸುವ ಆಶಯ ವ್ಯಕ್ತಪಡಿಸಿದಾಗ ನಾನೇ ಅವರನ್ನು ಕೈ ಮುಗಿದು ತಡೆದಿರುವೆ, ನಾನು ಗೌರವಾನ್ವಿತ ರಾಜಕಾರಣಿ, ಹೀಗಾಗಿ ಯಾವ ಗೊಂದಲ ಉಂಟಾಗದಂತೆ ನೋಡಿಕೊಂಡಿರುವೆ’ ಎಂದರು.

ಸಂಕಷ್ಟದಲ್ಲಿ ಸಕ್ಕರೆ ಕಾರ್ಖಾನೆಗಳು

‘ಸಕ್ಕರೆ ಕಾರ್ಖಾನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಿಯಮಾವಳಿ ಪರಿಷ್ಕರಣೆ ಮಾಡಬೇಕು, ಇಲ್ಲವಾದರೆ ಕೈಮಗ್ಗಗಳ ಮಾದರಿಯಲ್ಲಿ ಸಕ್ಕರೆ ಕಾರ್ಖಾನೆಗಳು ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಬೆಳೆಗಾರರ ಹಿತ ಎರಡು ಮುಖ್ಯ. ಆದರೆ, ಕೇಂದ್ರ ಸರ್ಕಾರದ ನೀತಿಗಳಿಂದ ಸಹಕಾರ ವಲಯದ ಸಕ್ಕರೆ ಕಾರ್ಖಾನೆಗಳಿಗೆ ದೊಡ್ಡ ಆತಂಕ ಎದುರಾಗಿದೆ ಎಂದರು.’ಇಳುವರಿ ಆಧರಿಸಿ ಎಫ್.ಆರ್.ಪಿ. ನಿಗದಿಯಾಗುತ್ತದೆ. ಭೀಮಾತೀರದಲ್ಲಿ ಕಬ್ಭಿನ ರಿಕವರಿ ಪ್ರಮಾಣ ಕಡಿಮೆ, ಹೀಗಾಗಿ ಎಫ್.ಆರ್.ಪಿ ನಿಗದಿಗೊಳಿಸಲು ಏಕರೂಪದ ಮಾನದಂಡ ವಿಧಿಸುತ್ತಿರುವುದು ಸರಿಯಲ್ಲ, ಭೌಗೋಳಿಕವಾಗಿ ಭಿನ್ನವಾದ ಪರಿಸ್ಥಿತಿ ಇದೆ ಹೀಗಾಗಿ ಎಂ.ಎಸ್.ಪಿ. ಘೋಷಣೆ ಮಾಡಬೇಕು’ ಎಂದರು.

ಈಥೆನಾಲ್ ಆಮದು ಬೇಡ

ಈಥೆನಾಲ್ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೂಪಿಸಿರುವ ನೀತಿ ನಿಯಮವಾವಳಿಗಳು ದೊಡ್ಡ ತೊಡಕಾಗಿವೆ, ಈ ಎಲ್ಲವೂ ಮಾರ್ಪಾಡಬೇಕು, ಈ ಹಿಂದೆ ಈಥೆನಾಲ್ ಉತ್ಪಾದನೆಗೆ ಪ್ರೋತ್ಸಾಹ ನೀಡಿದ ಪರಿಣಾಮ ದೊಡ್ಡ ಮಟ್ಟದಲ್ಲಿ ಈಥೆನಾಲ್ ಉತ್ಪಾದನೆಯಾಗುತ್ತಿದೆ. ಆದರೆ, ಬೆಲೆ ಕಡಿಮೆ ಎಂದು ಅಮೆರಿಕಾದಿಂದ ಆಮದು ಮಾಡಿಕೊಳ್ಳಲು ಮುಂದಾಗಿರುವುದು ದೊಡ್ಡ ಆತಂಕ ಸೃಷ್ಟಿ ಮಾಡಿದೆ ಎಂದರು.ಉತ್ಪಾದನೆ ಮಾಡಿದ ಈಥೆನಾಲ್ ಅನ್ನು ಕೇಂದ್ರ ಸರ್ಕಾರ ಖರೀದಿ ಮಾಡುತ್ತಿಲ್ಲ, ಈ ರೀತಿಯಾದರೆ ಉತ್ಪಾದನೆ ಮಾಡಲು ಉತ್ತೇಜನ ನೀಡಿದ್ದು ಯಾಕೆ ಎಂದು ಪ್ರಶ್ನಿಸಿದರು.

Previous Post

ಮಳೆಯಿಂದ ಭಾರೀ ಹಾನಿ – 23 ಕೋಟಿ ಪರಿಹಾರ ಘೋಷಣೆ

Next Post

ಕಬ್ಬಿಗೆ 3300 ರೂ. ನಿಗದಿ: ರೈತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

I Today News

I Today News

Next Post
ಕಬ್ಬಿಗೆ 3300 ರೂ. ನಿಗದಿ: ರೈತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಕಬ್ಬಿಗೆ 3300 ರೂ. ನಿಗದಿ: ರೈತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

Leave a Reply Cancel reply

Your email address will not be published. Required fields are marked *

Stay Connected test

  • 86.9k Followers
  • 23.9k Followers
  • 99 Subscribers
  • Trending
  • Comments
  • Latest
ಇಂಡಿ ತಾಲ್ಲೂಕಿನಲ್ಲಿ ಅಪಘಾತ – ಬೈಕ್ ಸವಾರ ಸ್ಥಳದಲ್ಲೇ ಮೃತ

ಇಂಡಿ ತಾಲ್ಲೂಕಿನಲ್ಲಿ ಅಪಘಾತ – ಬೈಕ್ ಸವಾರ ಸ್ಥಳದಲ್ಲೇ ಮೃತ

August 30, 2025
ಇಂಡಿಯಲ್ಲಿ ಸುಗಮ ಸಂಚಾರಕ್ಕಾಗಿ ಜೆಸಿಬಿ ಘರ್ಜನೆ

ಇಂಡಿಯಲ್ಲಿ ಸುಗಮ ಸಂಚಾರಕ್ಕಾಗಿ ಜೆಸಿಬಿ ಘರ್ಜನೆ

August 9, 2024
ಭೀಮಾತೀರದಲ್ಲಿ ಅಕ್ರಮ ಚಟುವಟಿಕೆ ಕಡಿವಾಣಕ್ಕೆ ADGP ಅಲೋಕಕುಮಾರ ಭೇಟಿ

ಭೀಮಾತೀರದಲ್ಲಿ ಅಕ್ರಮ ಚಟುವಟಿಕೆ ಕಡಿವಾಣಕ್ಕೆ ADGP ಅಲೋಕಕುಮಾರ ಭೇಟಿ

July 20, 2022
ಅಕ್ರಮ ಅಕ್ಕಿ ಸಾಗಾಟ ಆರೋಪ ಸಾಬೀತು ಮುಖ್ಯಶಿಕ್ಷಕ ಶರಣಪ್ಪ ಅಮಾನತು

ಅಕ್ರಮ ಅಕ್ಕಿ ಸಾಗಾಟ ಆರೋಪ ಸಾಬೀತು ಮುಖ್ಯಶಿಕ್ಷಕ ಶರಣಪ್ಪ ಅಮಾನತು

June 11, 2022

ಕಾಂಗ್ರೆಸ್ ಪಕ್ಷದ ಸಹವಾಸ ಮಾಡಿದ ಪಕ್ಷ ಉಳಿಯಲ್ಲ: ಎಂಪಿ

4
ನಾವು ಸೋಮಣ್ಣರನ್ನು ಕಾಂಗ್ರೆಸ್ ಗೆ ಕರೆದಿಲ್ಲ: ಡಿಕೆಶಿ

ನಾವು ಸೋಮಣ್ಣರನ್ನು ಕಾಂಗ್ರೆಸ್ ಗೆ ಕರೆದಿಲ್ಲ: ಡಿಕೆಶಿ

3

 ಬಿಸಿ ಊಟದ ಜೊತೆ ಗುಲಾಬ್-ಜಾಮೂನ

1
ಇಂಡಿಯಲ್ಲಿ ಸುಗಮ ಸಂಚಾರಕ್ಕಾಗಿ ಜೆಸಿಬಿ ಘರ್ಜನೆ

ಇಂಡಿಯಲ್ಲಿ ಸುಗಮ ಸಂಚಾರಕ್ಕಾಗಿ ಜೆಸಿಬಿ ಘರ್ಜನೆ

1
ಬಬಲೇಶ್ವರದಲ್ಲಿ KSRTC ಬಸ್ ಡಿಕ್ಕಿ — ಬೈಕ್ ಸವಾರ ಗಂಭೀರ ಗಾಯ

ಬಬಲೇಶ್ವರದಲ್ಲಿ KSRTC ಬಸ್ ಡಿಕ್ಕಿ — ಬೈಕ್ ಸವಾರ ಗಂಭೀರ ಗಾಯ

February 26, 2026
ಕರ್ನಾಟಕ ಕಾಂಗ್ರೆಸ್ ಸಿಎಂ ಕುರ್ಚಿ ವಿಚಾರಕ್ಕೆ ಅಂತ್ಯವಾ? ಖರ್ಗೆ ಸ್ಪೋಟಕ ಹೇಳಿಕೆ ಸಂಚಲನ

ಕರ್ನಾಟಕ ಕಾಂಗ್ರೆಸ್ ಸಿಎಂ ಕುರ್ಚಿ ವಿಚಾರಕ್ಕೆ ಅಂತ್ಯವಾ? ಖರ್ಗೆ ಸ್ಪೋಟಕ ಹೇಳಿಕೆ ಸಂಚಲನ

February 26, 2026
ಕರ್ನಾಟಕದಲ್ಲಿ 3 ತಿಂಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ | ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ

ಕರ್ನಾಟಕದಲ್ಲಿ 3 ತಿಂಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ | ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ

February 25, 2026
ಸಿಂದಗಿ PSI ಶ್ರೀಕಾಂತ್ ಕಾಂಬಳೆರಿಂದ ರೋಡ್ ರೋಮಿಯೋಗಳಿಗೆ ಎಚ್ಚರಿಕೆ

ಸಿಂದಗಿ PSI ಶ್ರೀಕಾಂತ್ ಕಾಂಬಳೆರಿಂದ ರೋಡ್ ರೋಮಿಯೋಗಳಿಗೆ ಎಚ್ಚರಿಕೆ

February 20, 2026

Recent News

ITodayNews

I TodayNews is a Daily Free News Website ,user can get Live Update News around the world and Namma Karnataka, bring the latest news and information to viewers

Follow Us

Browse by Category

  • Bagewadi
  • Bijapur
  • Business
  • Chadchan/Naghtan
  • Devar Hipparagi
  • Education
  • Entertainment
  • Health
  • indi
  • karnataka
  • Muddebihal
  • National
  • News
  • Newsbeat
  • Politics
  • Science
  • Sindagi
  • Sports
  • Stories
  • Tech
  • Uncategorized
  • World
  • Youtube Videos

Recent News

ಬಬಲೇಶ್ವರದಲ್ಲಿ KSRTC ಬಸ್ ಡಿಕ್ಕಿ — ಬೈಕ್ ಸವಾರ ಗಂಭೀರ ಗಾಯ

ಬಬಲೇಶ್ವರದಲ್ಲಿ KSRTC ಬಸ್ ಡಿಕ್ಕಿ — ಬೈಕ್ ಸವಾರ ಗಂಭೀರ ಗಾಯ

February 26, 2026
ಕರ್ನಾಟಕ ಕಾಂಗ್ರೆಸ್ ಸಿಎಂ ಕುರ್ಚಿ ವಿಚಾರಕ್ಕೆ ಅಂತ್ಯವಾ? ಖರ್ಗೆ ಸ್ಪೋಟಕ ಹೇಳಿಕೆ ಸಂಚಲನ

ಕರ್ನಾಟಕ ಕಾಂಗ್ರೆಸ್ ಸಿಎಂ ಕುರ್ಚಿ ವಿಚಾರಕ್ಕೆ ಅಂತ್ಯವಾ? ಖರ್ಗೆ ಸ್ಪೋಟಕ ಹೇಳಿಕೆ ಸಂಚಲನ

February 26, 2026
© 2024 I Today News - Designed and Maintained by OnNets Technology Services.
  • About
  • Contact
  • Privacy & Policy
  • Disclaimer
  • Terms and Conditions

No Result
View All Result
  • Home
  • karnataka
  • Indi
  • Bijapur
  • Bagewadi
  • Muddebihal
  • Sindagi
  • National
  • Youtube Videos

WhatsApp us