
ಗದಗ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆಯ ವತಿಯಿಂದ ವಾರ್ಷಿಕ ಸಭೆ 3/7/22 ರಂದು ಜರುಗಿದ್ದು ಈ ಸಭೆಯಲ್ಲಿ ಅತ್ಯುತ್ತಮ ಸೈಕ್ಲಿಂಗ್ ಕ್ರೀಡಾ ಪಟುಗಳು ಮತ್ತು ತರಬೇತಿದಾರರನ್ನು ಗುರುತಿಸಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು ಈ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಕೊಡಮಾಡುವ ಅತ್ಯುತ್ತಮ ಸೈಕ್ಲಿಂಗ್ ಕೊಚ್ ಆಗಿ ವಿಜಯಪುರ ಕ್ರೀಡಾ ನಿಲಯದ ಅಲ್ಕಾ ಪಡತಾರೆ ಅವರಿಗೆ ನೀಡಿ ಗೌರವಿಸಲಾಗಿದೆ.

ಇದರ ಪ್ರಯುಕ್ತ ವಿಜಯಪುರ ಕ್ರೀಡಾ ನೀಲಯದಲ್ಲಿ ಅತ್ಯುತ್ತಮ ಕೊಚ್ ಆಗಿರುವ ಅಲ್ಕಾ ಪಡತಾರೆ ಅವರಿಗೆ ನೀಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ಕೇಕ್ ಕಟ್ ಮಾಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಜು ಪಡತಾರೆ,ಬಾಲಿಬಾಲ್ ಕೋಚ್ ಆಗಿರುವ ರಫೀಕ್ ನಧಾಪ್, ಬಾಸ್ಕೆಟ್‌ಬಾಲ್ ಕೋಚ್ ಮಲ್ಲನಗೌಡ ಪಾಟೀಲ ಹಾಗೂ ಸಿಬ್ಬಂದಿಗಳು ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬ್ಯೂರೋ ರಿಪೋರ್ಟ್: ಲಾಲಸಾಬ ಸವಾರಗೋಳ I Today News ವಿಜಯಪುರ










