
22 ವರ್ಷದ ಪ್ರೇಯಸಿಗೆ ಕಾರು ತೆಗೆದುಕೊಡಲು 44 ವರ್ಷದ ವ್ಯಕ್ತಿ ತನ್ನ ಹೆಂಡತಿಯ ಚಿನ್ನಾಭರಣವನ್ನು ಕಳವು ಮಾಡಿದ ಘಟನೆ ಚೆನ್ನೈನಲ್ಲಿ ನಡೆದಿದೆ.
ಇನ್ನು ಬಂಧಿತ ಆರೋಪಿಯನ್ನು ಶೇಖರ್ ಎಂದು ಗುರುತಿಸಲಾಗಿದೆ ಇವನೊಂದಿಗೆ ಆತನ 22 ವರ್ಷದ ಪ್ರಿಯಸಿ ಸ್ವಾತಿಯನ್ನು ಬಂಧಿಸಲಾಗಿದೆ. ಇನ್ನು ಈತ ತೆಗೆದುಕೊಟ್ಟ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ ಕೆಲವು ಭಿನ್ನಾಭಿಪ್ರಾಯಗಳಿಂದಾಗಿ ಎರಡು ವರ್ಷಗಳ ಹಿಂದೆ ಶೇಖರ ಪತ್ನಿ ಮಲ್ಲಿಕಾ ಮನೆ ಬಿಟ್ಟು ಹೋಗಿದ್ದಳು. ತನ್ನ ಒಡವೆ ತೆಗೆದುಕೊಳ್ಳಲೆಂದು ಮಲ್ಲಿಕಾ ಇತ್ತೀಚೆಗೆ ಗಂಡನ ಮನೆಗೆ ಮರಳಿದ್ದಳು.
ಇನ್ನು ಈತ ಶೇಖರ್ ಚೆನನೈನಲ್ಲಿರುವ ಪೂನಮಲ್ಲಿ ಏರಿಯಾದಲೆಲ್ಲಿರುವ ತಾಯಿ ಮತು ಸಹೋದರ ರಾಜೇಶ್ ಕುಟುಂಬದ ಜೊತೆಗೆ ವಾಸವಾಗಿದ್ದಾನೆ. ಇಲಿ ಮನೆಗೆ ಭೇಡಿ ನೀಡಿದ ಹೆಂಡಿತಿ ತನ್ನ ಚಿನ್ನಾಭರಣವನ್ನು ಹುಡುಕಿದ್ದಾಳೆ ಈ ಸಂದರ್ಭದಲ್ಲಿ ಅಲ್ಲಿ ಯಾವುದೇ ಚಿನ್ನ ಸಿಗದ ಸಂದರ್ಭದಲ್ಲಿ ಪೊಲೀಸರ ಮೊರೆ ಹೋಗೆ ದೂರು ಧಾಖಲಿಸಿದ್ದಾಳೆ. ತನಿಖೆ ಆರಂಭಿಸಿದ ಪೂಲೀಸರಿಗೆ ಕಳ್ಳ ಬೇರೆ ಯಾರು ಇಲ್ಲ ಮನೆಯಲ್ಲಿರುವ ಶೇಖರ್ ಎಂಬುದು ಗೊತ್ತಾಯಿತು. ವಿಚಾರಣೆ ನಡೆಸಿದಾಗ ಶೇಖರ್ ಸಹ ತಪ್ಪೊಪ್ಪಿಕೊಂಡಿದ್ದು ಮನೆಯಲ್ಲಿದ್ದ ಪತ್ನಿಯ 300 ಸವರನ್ ಮತ್ತು ತನ್ನ ತಾಯಿಯ 200 ಸವರನ್ ಚಿನ್ನವನ್ನು ಕದ್ದಿರುವುದಾಗಿ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ.
ಕದ್ದ ಚಿನ್ನವನ್ನು ಆರೋಪಿ ಶೇಖರ್ ತನ್ನ ಪ್ರೇಯಸಿ ಸ್ವಾತಿಗೆ ಉಡುಗೊರೆಯಾಗಿ ನೀಡಿದ್ದಾನೆ. ಅಲ್ಲದೆ ಕದ್ದ ಚಿನ್ನದಲ್ಲಿ ಒಂದಿಷ್ತು ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ಆಕೆಗಾಗಿ ಕಾರನ್ನು ಸಹ ಶೇಖರ್ ಕೊಂಡು ತಂದಿದ್ದ ಇದೀಗ ಇಬ್ಬರು ಬಂಧಿಸಿರುವ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ ಮತ್ತಷ್ಟು ತನಿಖೆ ಆರಂಭವಾಗಿದೆ.










