
ಇಂಡಿ : ಜಿಲ್ಲಾ ಮಟ್ಟದ ಮುಹಮ್ಮದಿಯಾ ನಾತ್ ಕಮಿಟಿ ವತಿಯಿಂದ ವಿಜಯಪುರದ ಕಂದಗಲ ಹಣಮಂತರಾಯ ರಂಗಮಂದಿರದಲ್ಲಿ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ ಜರುಗಿತು.ಈ ಸ್ಪರ್ಧೆಯಲ್ಲಿ ಇಂಡಿ ಪಟ್ಟಣದ ಅಂಜುಮನ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಬುಶ್ರಾ ಯಡ್ರಾಮಿ ಮತ್ತು ಮಾರೂಫಾ ಅಡ್ಡೆವಾಲೆ ಪ್ರಥಮ ಸ್ಥಾನ ಪಡೆದು ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ.
ಇವರಿಗೆ ಮೊಹಮ್ಮದ್ ಮೋಹಸಿನ ಅವರು ಬಹುಮಾನ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಜಹಾಂಗೀರ ಹಿಪ್ಪರಗಿ,ಅಬ್ದುಲ್ಲನಬಿ ಜಮಾದಾರ,ಬಶೀರ ಇನಾಮದಾರ, ಮುಖ್ಯ ಶಿಕ್ಷಕ ಸುಲೆಮಾನ ಇಂಡೀಕರ,ಹುಮಾಯೂನ್ ಬಿಲ್ವಾರ, ಮುಜೀಬ್ ಬಾಗವಾನ, ಬೆಳಕು ನಗರದ ಹಸನ ಮುಜಾವರ,ಮುಜೀಬುರ ರಹಮಾನ, ರಫೀಕ್ ಜಂಬಗಿ, ನೂರಅಹ್ಮದ ವಾಚಮೇಕರ್,ಮಹಮದ್ ರಫೀಕ್ ಗುಲಬರ್ಗಾ,ಇಸಾಕ್ ಮುಲ್ಲಾ, ಸೋಫಿಯಾ ಚಂದರಗಿ,ಫಾತಿಮಾ ಘೋಡೆಸವಾರ,ಯಾಸೀನ್ ಟಪಾಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.










