
ವಾಣಿಜ್ಯ ಮತ್ತು ಕೈಗಾರಿಕಾ ಸಚಿವರೂ, ಉತ್ತರ ಮುಂಬೈನ ಲೋಕಸಭಾ ಸಂಸದರರೂ ಆಗಿರುವ ಪೀಯೂಷ್ ಗೋಯಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ: ಕರ್ನಾಟಕದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಜಿಐ ಟ್ಯಾಗ್ ಪಡೆದ ಕಾಗದಿ ನಿಂಬೆ 3 ಮೆಟ್ರಿಕ್ ಟನ್ಗಳನ್ನು ಮೊದಲ ಬಾರಿಗೆ ಯುಎಇಗೆ ರಫ್ತು ಮಾಡಲಾಗಿದೆ. ಈ ಸಾಧನೆಗೆ ಎಪಿಡಾ (APEDA) ಸಂಸ್ಥೆಯ ಪ್ರಯತ್ನಗಳನ್ನು ಅವರು ಪ್ರಶಂಸಿಸಿದ್ದಾರೆ.

ಪೀಯೂಷ್ ಗೋಯಲ್ ಹೇಳಿದರು: ಈ ಮೈಲುಗಲ್ಲು ಭಾರತದಲ್ಲಿ ಜಿಐ ಟ್ಯಾಗ್ ಪಡೆದ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ದಾರಿಗಳನ್ನು ತೆರೆಯುತ್ತದೆ ಮತ್ತು ರೈತರು ಹಾಗೂ ರಫ್ತುದಾರರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುತ್ತದೆ.ಗಮನಾರ್ಹ ಸಂಗತಿ ಏನೆಂದರೆ, ಇಂಡಿ ತಾಲ್ಲೂಕಿನ ಕಾಗದಿ ನಿಂಬೆ ತನ್ನ ವಿಶೇಷ ಸುಗಂಧ ಮತ್ತು ರುಚಿಯಿಂದಲೇ ಪ್ರಸಿದ್ಧಿ ಪಡೆದಿದ್ದು, ಜಿಐ ಟ್ಯಾಗ್ ಸಿಕ್ಕ ನಂತರ ಅಂತಾರಾಷ್ಟ್ರೀಯ ಬೇಡಿಕೆ ಹೆಚ್ಚುವ ನಿರೀಕ್ಷೆಯಿದೆ.











