
ಪುಣೆ (ಮಹಾರಾಷ್ಟ್ರ): ಮಾನವೀಯತೆ ಮತ್ತು ಪ್ರೀತಿಯ ಅಪೂರ್ವ ಉದಾಹರಣೆ ನೀಡಿದ ಪತ್ನಿ, ಲಿವರ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪತಿಯ ಜೀವ ಉಳಿಸಲು ತನ್ನದೇ ಲಿವರ್ ದಾನ ಮಾಡಿದರು. ಆದರೆ ವಿಧಿಗೆ ಬೇರೆದ್ದೇ ಒಪ್ಪಿತ್ತು. ಶಸ್ತ್ರಚಿಕಿತ್ಸೆಯ ಬಳಿಕ ಪತಿ-ಪತ್ನಿ ಇಬ್ಬರೂ ಸಾವನ್ನಪ್ಪಿದ ದಾರುಣ ಘಟನೆ ಪುಣೆಯ ಸಹ್ಯಾದ್ರಿ ಆಸ್ಪತ್ರೆಯಲ್ಲಿ ನಡೆದಿದೆ.
ಮಾಹಿತಿಯ ಪ್ರಕಾರ, ಪತಿ ಲಿವರ್ ಸಮಸ್ಯೆಯಿಂದ ಹಲವು ದಿನಗಳಿಂದ ಬಳಲುತ್ತಿದ್ದರು. ವೈದ್ಯರು ಲಿವರ್ ಟ್ರಾನ್ಸ್‌ಪ್ಲಾಂಟ್ ಮಾಡಲು ಸಲಹೆ ನೀಡಿದಾಗ, ಪತ್ನಿಯೇ ನಿಸ್ವಾರ್ಥ ಭಾವದಿಂದ ಲಿವರ್ ದಾನ ಮಾಡಲು ಮುಂದಾದರು. ಆದರೆ ಶಸ್ತ್ರಚಿಕಿತ್ಸೆಯ ನಂತರ ಇಬ್ಬರಿಗೂ ಗಂಭೀರ ಸಮಸ್ಯೆ ಉಂಟಾಗಿ, ಅಂತಿಮವಾಗಿ ಬದುಕಿಗಾಗಿ ಹೋರಾಟ ವಿಫಲವಾಯಿತು.
ಈ ಘಟನೆ ಬೆಳಕಿಗೆ ಬಂದ ತಕ್ಷಣ, ಆರೋಗ್ಯ ಸೇವೆಗಳ ಉಪ ನಿರ್ದೇಶಕ ಡಾ. ನಾಗನಾಥ್ ಯೆಂಪೆಲ್ಲ ಅವರು ಸಹ್ಯಾದ್ರಿ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಿದ್ದಾರೆ. ಜೊತೆಗೆ, ಅಂಗಾಂಗ ಕಸಿ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಹಾಗೂ ಮಾಹಿತಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.
ಈ ದಾರುಣ ಘಟನೆ ಕುಟುಂಬಕ್ಕೆ ಮಾತ್ರವಲ್ಲ, ಸಮಾಜಕ್ಕೂ ಭಾರೀ ಆಘಾತ ತಂದಿದೆ.










