
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ವತಿಯಿಂದ ಇಂಡಿ ತಾಲೂಕಿನ ಗೂಗಿಹಾಳ ಕೆರೆಯಿಂದ ಕಡೆಹಳ್ಳಿ ಮಿರಗಿ ಗ್ರಾಮದ ಹೊಳೆಯವರೆಗೆ ನೀರು ಹರಿಸುವ ಕುರಿತು ಅಪರ ಜಿಲ್ಲಾಧಿಕಾರಿಗಳಾದ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷರಾದ ಜಗದೇವ ಸೂರ್ಯವಂಶಿ ಮಾತನಾಡಿ, ಮಿರಗಿ, ಗೊಳಸಾರ & ನಾದ ಗ್ರಾಮದ ರೈತರು ಮಾತನಾಡಿ ನಮ್ಮ ಭಾಗವಲ್ಲಿ ಧನ ಕರಗಳಿಗೂ ಸಹ ಕುಡಿಯಲು ನೀರಿಲ್ಲದೆ ಧನ ಕರಗಳು ಸಾವನಪ್ಪುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.










