
ಇಂಡಿ ಜಿಲ್ಲೆಯಾಗಿ ಪರಿವರ್ತನೆ ಮಾಡಬೇಕೆಂದು ಆಗ್ರಹಿಸಿ ಗುರುವಾರ ಇಂಡಿಯ ಕಾರ್ಯನಿರತ ಪರ್ತಕರ್ತರ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ಪ್ರತಿಭಟನೆ ನಂತರ ಮಿನಿ ವಿಧಾನಸೌಧ ತಲುಪಿ ಅಲ್ಲಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಇವರಿಗೆ ಮನವಿ ಸಲ್ಲಿಸಿದರು.ಅಲ್ಲಿ ಸಂಘದ ಅಧ್ಯಕ್ಷ ಅಬುಶ್ಯಾಮ ಹವಾಲ್ದಾರ ಮಾತನಾಡಿ ೧೯೯೬ ರಲ್ಲಿ ಜೆ.ಎಚ್.ಪಟೇಲ ಮುಖ್ಯಮಂತ್ರಿಗಳಿದ್ದಾಗ ವಿಜಯಪುರ ಜಿಲ್ಲೆಯನ್ನು ವಿಭಜಿಸಿ ಬಾಗಲಕೋಟ ಜಿಲ್ಲೆಯಾಗಿ ಮಾಡಿದರು. ಈಗ ಅದೇ ಮಾದರಿಯಲ್ಲಿ ಸಿದ್ದರಾಮಯ್ಯ ಇಂಡಿ ಜಿಲ್ಲೆಯಾಗಿ ಮಾಡಲು ಆಗ್ರಹಿಸಿದರು.ಸಂಘದ ರಾಜಕುಮಾರ ಚಾಬುಕಸವಾರ ಮಾತನಾಡಿ ದೇಶದಲ್ಲಿ ಮೊದಲು ಇದ್ದ ರಾಜ್ಯಕ್ಕಿಂತ ಅಭಿವೃದ್ಧಿಗಾಗಿ ಹೆಚ್ಚು ರಾಜ್ಯಗಳನ್ನು ಮಾಡಿದ್ದಾರೆ.
ಉತ್ತರಾಂಚಲ,ಛತ್ತಿಸಗಡ,ತೆಲಗಾAಣ ರಾಜ್ಯಗಳು ಬೇರ್ಪಡೆಯಾದ ನಂತರ ತೀರ್ವ ಅಭಿವೃದ್ದಿ ಕಂಡಿವೆ. ಅದರಂತೆ ಕರ್ನಾಟಕಲ್ಲೂ ಮೊದಲು ಇದ್ದ ಜಿಲ್ಲೆ ಹೆಚ್ಚಿಗೆ ಮಾಡಿ ಬಾಗಲಕೋಟ, ಯಾದಗಿರಿ ಸೇರಿದಂತೆ ಮಾಡಿದ್ದರಿಂದ ಅವು ಹೆಚ್ಚು ಪ್ರಗತಿಯಲ್ಲಿವೆ. ಹೀಗಾಗಿ ಪ್ರಗತಿಯ ದೃಷ್ಠಿಯಿಂದ ಇಂಡಿ ಜಿಲ್ಲೆ ಮಾಡಿದರೆ ಈ ಭಾಗ ಅಭಿವೃದ್ದಿ ಕಾಣಲು ಸಾಧ್ಯ ಎಂದರು. ಸಂಘದ ಶಂಕರ ಜಮಾದಾರ ಮಾತನಾಡಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಹಲವಾರು ಜಿಲ್ಲೆ, ಬಿಹಾರದಲ್ಲಿ ಸೇರಿದಂತೆ ದೇಶದ ಅನೇಕ ಕಡೆ ಹಲವಾರು ಜಿಲ್ಲೆ ಕೊಡುಗೆ ನೀಡಿದ್ದು ಅದೇ ಮಾದರಿ ಇಂಡಿ ಜಿಲ್ಲೆ ಮಾಡಬೇಕೆಂದರು.
ಸಂಘದ ಯಲಗೊಂಡ ಬೇವನೂರ,ಉಮೇಶ ಬಳಬಟ್ಟಿ,ಲಕ್ಷಣ ಹಿರೆಕುರಬರ ಮಾತನಾಡಿ ಶರದ ಪವಾರ,ರಾಮ ನರೇಶ ಯಾದವ,ವೀರಭದ್ರಸಿಂಗ ಸೇರಿದಂತೆ ಅನೇಕ ಮುತ್ಸದ್ದಿ ಮುಖ್ಯಮಂತ್ರಿಗಳು ಅಭಿವೃದ್ಧಿಗಾಗಿ ಜಿಲ್ಲೆಗಳನ್ನಾಗಿ ಮಾಡಿ ಸಮರ್ಥಿಸಿಕೊಂಡಿದ್ದಾರೆ. ಕಾರಣ ಚಿಕ್ಕ ಚಿಕ್ಕ ಜಿಲ್ಲೆಗಳು ಅಭಿವೃದ್ದಿಗೆ ಪೂರಕವಾಗುತ್ತವೆ ಎಂದರು.ಪ್ರತಿಭಟನೆಯಲ್ಲಿ ಲಾಲಸಿಂಗ ರಾಠೋಡ, ನಾಗರಾಜ ಆಸಂಗಿ, ಅಲ್ಲಾಬಕ್ಷ ಗೋರೆ, ಅರವಿಂದ ಖಡೆಖಡೆ, ಸದ್ದಾಂ ಹುಸೇನ ಜಮಾದಾರ, ಅಂಬಣ್ಣ ರಾಂಪೂರ, ಜಹಾಂಗೀರಬಾಷಾ ದೇಸಾಯಿ, ಪ್ರವೀಣ ಮಠ ಮತ್ತಿತರಿದ್ದರು.








